ಅಪಮೃತ್ಯು ಪರಿಹರಿಸೊ ಅನಿಲದೇವಾ
ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು ಪ
ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು
ಎನಗಿಲ್ಲವಾವಾವ ಜನ್ಮದಲ್ಲಿ
ಅನುದಿನ ನೀನೆಮ್ಮನುದಾಸೀನ ಮಾಡುವುದು
ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೆ 1
ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ
ದೊರೆಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ 2
ಭವರೋಗ ಮೋಚಕನೆ ಪವಮಾನರಾಯಾ ನಿ
ನ್ನವರನು ನಾನು ಮಾಧವಪ್ರಿಯನೇ
ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ 3
e್ಞÁನಾಯು ರೂಪಕನು ನೀನಹುದೋ ವಾಣಿ ಪಂ
ಚಾನನಾದ್ಯಮರರಿಗೆ ಪ್ರಾಣದೇವಾ
ದೀನವತ್ಸಲನೆಂದು ನಿನ್ನ ಮೊರೆ ಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದ ಎಮ್ಮ 4
ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವು ಅಲ್ಲ ಸಾಧುಪ್ರಿಯಾ
ವೇದವದೋದಿತ ಜಗನ್ನಾಥ ವಿಠಲನ
ಪಾದ ಭಕುತಿಯನಿತ್ತು ಮೋದ ಕೊಡು ಸತತ5
No comments:
Post a Comment