Labels

Saturday, 5 October 2019

ರಾಮ ಮಂತ್ರವ ಜಪಿಸೋ Rama mantrava japiso

ರಾಮ ಮಂತ್ರವ ಜಪಿಸೋ ಹೇ ಮನುಜ
ರಾಮ ಮಂತ್ರವ ಜಪಿಸೋ
ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನ ಭಾಮೆಗ್ಹೆಳಿದ ಮಂತ್ರ
ಕುಲಹೀನನಾದರು ಕೂಗಿ ಜಪಿಸೋ ಮಂತ್ರ
ಸಲೆಬೀದಿಯೊಳು ಉಚ್ಚರಿಸುವ ಮಂತ್ರ
ಹಲವು ಪಾಪಂಗಳ ಹದಗೆಡಿಸುವ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊoಬುವ  ಮಂತ್ರ
ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ರಿಶಿಗಳಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ
ಜ್ಞಾನನಿಧಿ ನಮ್ಮ ಆನ೦ದ ತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನು ಕುಲಾ೦ಬುಧಿ ಸೋಮನೆನಿಪ ನಮ್ಮ
ದೀನ ರಕ್ಷಕ ಪುರಂದರವಿಠಲನ ಮಂತ್ರ

No comments:

Post a Comment