ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು IIಪII
ಪದುಮನಾಭನ ಪಾದಪದುಮ ಮಧುಪವೆಂಬ IIಅಪII
ಕಾಲಿಗೆ ಗೆಜ್ಜೆ ಕಟ್ಟಿ ನೀಲವಣ೯ನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ II೧II
ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃ೦ಗಾರ ನೋಡುತ್ತಾಕ೦ಗಾನ೦ದವೆ೦ಬ II೨II
ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿ೦ದಾನ೦ದವ ಪಡುವಂಥ II೩II
No comments:
Post a Comment