ಕಾಯೋ ಕಾವೇರಿ ರಂಗ ಕಾರುಣ್ಯ ಪಾಂಗ ||ಪ.||
ಕಾಯೊ ಕಾಯೊ ಕಾವೇರಿ ನಿಲಯನೆ ಕಾಯ ವಾಙ್ಮನಪೂರ್ಣದಲ್ಲಿಂದು
ತೋಯಜಾಂಘ್ರಿಯ ನಂಬಿದೆನೊ ಭವ ಮಾಯ ಗೆಲುವ ಉಪಾಯ ತೋರಿ ||ಅ.ಪ.||

ದೇವಾಧಿದೇವ ನೀನು ಪ್ರಣತಜನರಿಗೆ ದೇವತರುಮಣಿಧೇನು
ಎಂದರಿತು ನಿಷ್ಠಿಲಿ ಧಾವಿಸಿ ಬಂದೆ ನಾನು ರಘುವಂಶ ಭಾನು |
ಕಾವನಯ್ಯ ನೀ ಒಲಿದು ಕರುಣದಿ ಪಾವಮಾನಿಯ ಶಾಸ್ತ್ರವರಿತು
ಭಾವಭಕುತಿಲಿ ನಿನ್ನ ಪಾಡುವ ಕೋವಿದರ ಸೇವಕನ ಮಾಡಿ ||೧||

ಪನ್ನಂಗಪತಿಶಯನ ಶಿರಬಾಗಿ ಪ್ರಾರ್ಥಿಪೆ ಪನ್ನಂಗರಿಪುವಾಹನ
ಎನ್ನಪರಾಧವ ಮನ್ನಿಸೋ ಹಯವದನ ವೈಕುಂಠಸದನ |
ನಿನ್ನನುಗ್ರಹ ಪೂರ್ಣ ಪಡೆದು ಧನ್ಯರೆನಿಸಿದ ಮಾನ್ಯ ಮಾನವಿ
ಘನ್ನ ಗುರು ಜಗನ್ನಾಥದಾಸರ ಸನ್ನಿಧಾನದಿ ಬಂದೆ ಪ್ರಭುವೇ ||೨||

ನೇಸರಕುಲಜಾತ ವೇದೋಕ್ತ ಕ್ರಮದಿಂ ಭೂಸುರಕರ ಪೂಜಿತ
ಕೌಶಿಕನ ಯಜ್ಞವ ಪೋಷಕ ಪವನಪಿತ ಪಾವನ್ನ ಚರಿತ |
ವಾಸುದೇವಾನಂತ ಮಹಿಮ ವಿಭೀಷಣಪ್ರಿಯ ದೋಷ ಕಳೆಯುವ
ಭೇಶ ಪುಷ್ಕರಣೀಶ ಕೇಶವ ದಾಶರಥಿ ಶ್ರೀ ಶ್ಯಾಮಸುಂದರ ||೩||

No comments:
Post a Comment