Labels

Friday, 18 October 2019

ಈತನೀಗ ನಮ್ಮ ದೇವನು | Eetaneega namma devanu

ಈತನೀಗ ನಮ್ಮ ದೇವನು || ಪ ||
ಪ್ರೀತಿಯಿಂದಲಿ ಸ್ಮರಿಸುವವರ ಪಾತಕಗಳನೆಲ್ಲ ಪರಿಹರಿಪ | |ಅ.ಪ. | |
ಅಕ್ರೂರನ ಪ್ರೀತನೀತ | ಚಕ್ರ ಶಂಖ ಧರಿಸಿದಾತ |
ನಕ್ರ ಬಾಧೆಯ ತರಿದು ತನ್ನ ಭಕ್ತನನ್ನ ಕಾಯಿದಾತ ||
ಅಜಮಿಳನ ಸಲಹಿದಾತ | ಪ್ರಜದ ಗೋವು ಕಾಯಿದಾತ |
ಭಜಿಸುವವರ ಬಿಡನು ಪ್ರೀತನೀತ | ತ್ರಿಜಗದೊಳಗೆ ಮೆರೆವದಾತ ||
ಸಕಲಗುಣಪೂರ್ಣ ನೀತ | ಸಕಲ ದೋಶ ದೂರನೀತ |
ಸಕಲಾನಂದ ಭರಿತನಿತ | ಭಕುತಿಮಂತ್ರಕೊಲಿವದಾತ ||
ಅನಾದಿಕಾಲದಿ ಬಾಂಧವನೀತ | ಅನಾದಿ ಕಾಲದವನೀತ |
ಆ ನಾರಿ ಮೊರೆಯ ಕೇಳಿ | ಆನಿಮಿಷದೊಳು ಒದಗಿದಾತ | |
ಕಮಲಮುಖಿಯ ರಮಣನೀತ | ಕಮಲಾಸನ ಜನಕನೀತ |
ಕಮಲಾಕ್ಷ ಗೋಪಾಲ ವಿಠ್ಠಲ ಹೃತ್ ಕಮಲದೊಳು ನಿಲುವದಾತ | |

No comments:

Post a Comment