ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ ||ಪ||
ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ ||ಅ.ಪ||
ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ||೧||
ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ ||೨||
ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ ||೩||

No comments:
Post a Comment