Labels

Tuesday, 7 January 2020

ಜೋ ಜೋ ಜೋ ಅಂಜನಿ ಕಂದಾ jo jo anjani kanda


ಜೋ ಜೋ ಜೋ ಅಂಜನಿ ಕಂದಾ ಜೋ ಜೋ ಸಂಜೀವನ ತಂದಾ | ಜೋ ಜೋ ಸಾಧು ಸಜ್ಜನ ವೃಂದಾ | ಜೋ ಜೋ ವಾಯು ಬಾಲಮುಕುಂದಾ ಜೋ ಜೋ ಪ
ಭೂತೈದೆಂಬೊ ಕನ್ನಡಿ ಮಂಟಪದೊಳಗೆ | ಜ್ಯೋತಿ ದೀಪದ ಭಾಸ ಉನ್ಮನಿಯೊಳಗೆ | ಪ್ರೀತಿಂದ ಪ್ರಣವೆಂಬ ಮೇಲ್ಕಟ್ಟ ಕೆಳಗೆ ರಕ್ತಶ್ವೇತ ಶ್ಯಾಮ ನೀಲ ಖಿಡಕಿಯೊಳಗೆ ಜೋ ಜೋ 1
ಪಂಚ ಭೂತವೆಂಬ ಮಂಚವ ನಿಲಿಸಿ | ಪಂಚವಿಂಶತಿ ತತ್ತ್ವ ನವಾರ ಬಿಗಿಸಿ | ಪಂಚಕರಣವೆಂಬೋ ಹಾಸೀಗಿ ಹಾಸಿ | ಪಂಚ ಪ್ರಾಣವೆಂಬೋಲೇಪ ತೀವಿಸಿ ಜೋ ಜೋ 2
ಆರು ಚಕ್ರ ಮೀರಿದ ಸ್ಥಾನದಲ್ಲಿ | ಘೋರ ಘೋರ ಘೋಷ ಉನ್ಮನಿಯಲ್ಲಿ |ತುರ್ಯಾತೀತ ಶಂಕರ ತಾನೇ ಅಲ್ಲಿ | ಸೂರ್ಯ ಚಂದ್ರ ಅಗ್ನಿ ಮೂಜಗದಲ್ಲಿ ಜೋ ಜೋ 3


No comments:

Post a Comment