ಧರಣಿಗೆ ದೊರೆಯೆಂದು ನಂಬಿದೆ - ಇಂಥ ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ ಪ
ಕಾಡಿಬೇಡುವರಿಗೆ ಕೊಡಲಾರದೆ ಅಂಜಿ | ಓಡಿ ನೀರೊಳು ಸೇರಿಕೊಂಡೆ ಬೇಗ ||
ಹೇಡಿಯ ತೆರದಲಿ ಮೋರೆಯ ತೋರದೆ | ಓಡಿ ಅರಣ್ಯದಿ ಮೃಗಗಳ ಸೇರಿದೆ1
ಬಡವರ ಬಿನ್ನಪ ಲಾಲಿಸದಲೆ ಹಲ್ಲ | ಕಡುಕೋಪದಲಿ ತೆರೆದಂಜಿಸಿದೆ ||
ತಡೆಯದೆ ಭಿಕ್ಷುಕನಾದರು ಬಿಡರೆಂದು | ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆಯೊ2
ಉತ್ತಮನೆಂದರೆ ಮತ್ತೆ ಚೋರನಾದೆ | ಬತ್ತಲೆ ನಿಂತು ತೇಜಿಯನೇರಿದೆ |
ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ | ಚಿತ್ತಜ ಜನಕ ಶ್ರೀ ಪುರಂದರವಿಠಲನೆ 3
No comments:
Post a Comment