ಮಧ್ವಾಂತರ್ಗತ ವೇದವ್ಯಾಸ ಮಮ
ಹೃದ್ವನರುಹ ಸನ್ನಿವಾಸ ಪ
ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದ
ಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ ಅ
ಬಾದರಾಯಣ ಬಹುರೂಪಾ ಸನ
ಕಾದಿ ಸನ್ನುತ ಧರ್ಮಯೂಪಾ
ವೇದೋದ್ಧಾರ ದನಾದಿ ಕರ್ತ ಪೂರ್ಣ
ಬೋಧ ಸದ್ಗುರುವರಾರಾಧಿತ ಪದಯುಗ
ಮೇದಿನಿಯೊಳಾನೋರ್ವ ಪಾಮ
ರಾಧಮನು ಕೈ ಪಿಡಿ ಕರುಣ ಮ
ಹೋದಧೇ ಕಮನೀಯ ಕಾಯ ಪ್ರ
ಬೋಧ ಮುದ್ರಾಭಯ ಕರಾಂಬುಜ1
ಹರಿತೋಪ ಲಾಭ ಶರೀರಾ ಪರಾ
ಶರ ಮುನಿವರ ಸುಕುಮಾರ
ಪರಮ ಪುರುಷಕಾರ್ತಸ್ವರಗರ್ಭ ಪ್ರಮುಖ ನಿ
ರ್ಜರಗಣಮುನಿನುತ ವರಪಾದಪಂಕೇಜ
ಕುರುಕುಲದಿ ಧೃತರಾಷ್ಟ್ರ ಪಾಂಡು ವಿ
ದುರರ ಪಡೆದೈವರಿಗೊಲಿದು ಸಂ
ಹರಿಸಿ ದುರ್ಯೋಧನನ ಭಾರತ
ವಿರಚಿಸಿದ ಸುಂದರ ಕವೀಂದ್ರ 2
ಜಾತರೂಪ ಜಟಾ ಜೂಟ ಶ್ರೀ ನೀಕೇತನ ತಿಲಕ ಲಲಾಟ
ಪೀತ ಕೃಷ್ಣಾಜಿನ ಶ್ವೇತ ಶ್ರೀಯಜ್ಞೋಪ
ವೀತ ಮೇಖಲ ದಂಡಾನ್ವಿತ ಕಮಂಡಲ
ಭೂತಭಾವನ ಭೂತಿಕೃತ್ಸದ್ಭೂತಿದಾಯಕ ಶ್ರೀ ಜಗ
ನ್ನಾಥ ವಿಠಲನೆ ನಿನ್ನ ಮಹಿಮೆಯ
ನಾ ತುತಿಸಬಲ್ಲೆನೆ ಸುಖಾತ್ಮ 3
No comments:
Post a Comment