ಸಾಕ್ಷಾತ್ ಶಿವ ಜಗದೊಳಗೆ ಭವದಿ ಬಂದಿರೆ ಬಳಿಗೆ ನರನಲ್ಲಾ ನರನಲ್ಲಾ ಗುರುವರ ಪರನು ನರನಲ್ಲ ನರನಲ್ಲ \\ಪ\\
ಅಲ್ಲಹುದೆಂಬುದು ಭ್ರಾಂತೀ ಗುರುವಿಂದಲ್ಲದೆ ಆಗದು ಶಾಂತೀ ನರನಲ್ಲ ನರನಲ್ಲ \\1\\
ತಮ್ಮಂತಲೆ ನೋಡುವರು ದೇಹದ ಹಮ್ಮಿಂದಲೆ ಕೆಡುತಿಹರೂ ನರನಲ್ಲ ನರನಲ್ಲ\\ 2\\
ಭ್ರಾಂತದ ಮಾತೂ ಗುಹ್ಯೇಕಾಂತದಿ ಇಹುದೇನೋ ನರನಲ್ಲ ನರನಲ್ಲ\\ 3\\
ಗುರುಶಂಕರ ಪರಬ್ರಹ್ಮ ಒಂದೆ ಎಂದೊದರಿತೊ ಶ್ರುತಿ ನಿಯಮಾ ನರನಲ್ಲ ನರನಲ್ಲ\\4\\
No comments:
Post a Comment