ಆವ ಭಯವಿಲ್ಲವೋ ಆವ ಭಯವಿಲ್ಲ
ಆವ ಭಯವಿಲ್ಲ ಪರಾವರೇಶನ ಸಕಲ ಪ
ಠಾವಿಲಿ ಚಿಂತಿಸುವ ಭಾವಜ್ಞ ಜನರಿಗಿನ್ನು ಅ.ಪ.
ದೇಶಕಾಲೋಚಿತ ಧರ್ಮ ಗಿರ್ಮಗಳು ಸ
ನ್ಯಾಸ ಮೊದಲಾದಾಶ್ರಮೋಚಿತ ಸುಕರ್ಮಗಳು
ಮಾಸೋಪವಾಸ ವ್ರತ ನೇಮ ಗೀಮಗಳು ಸದ್
ವ್ಯಾಸಂಗ ಗೀಸಾಂಗವೊ ಆಸನ ಜಯಗಿಯ
ಪ್ರದೋಷನ ಧ್ಯಾಯಗೀಯ
ಶ್ವಾಸ ಬಂಧನ ಉಪನ್ಯಾಸ ತೀರ್ಥಾಟನೆ ರ
ಮೇಶನ ಗುಣಗಳಟ್ಟಹಾಸದಲಿ ನೆನೆವುತ ನಿ
ರಾಶೆಯಿಂದಿಪ್ಪ ಹರಿದಾಸ ದಾಸರಿಗೆ 1
ಸ್ನಾನ ಜಪ ದೇವತಾರ್ಚನೆ ವೈಶ್ಯದೇವ ಬಲಿ
ದಾನ ಪಾತ್ರಾಪಾತ್ರ ವಿಧಿ ನಿಷೇಧಗಳು ವಿ
e್ಞÁನ ವಿಹಿತಾಚರಣೆ ಸರ್ವತ್ರ ವಿನಯ
ಸಂಹನನ ವೈರಾಗ್ಯ ಶಕ್ತಿ
ಶ್ರೀನಿವಾಸನ ಪರಮ ವಿಮಲ ಲೋಕೈಕ ಕ
ಲ್ಯಾಣ ಗುಣ ರೂಪ ಕ್ರಿಯೆಗಳನು ಜಡ ಚೇತನದಿ
ಧೇನಿಸುತ ಮನದಿ ಹಿಗ್ಗುತ ತುತಿಸಿ ನಲಿವ ಸುಮ
ಹಾನು ಭಾವರಿಗೆ ಈರೇಳು ಲೋಕದೊಳು ಇನ್ನು2
ಮಲಿನರಾಗಿಹರು ನೋಳ್ಪರಿಗೆ ಪ್ರತಿ ದಿನದಲ್ಲಿ
ಸುಲಭರಂತಿಹರು ದುರ್ಗಮರಾಗಿ ತೋರುವರು
ಅಳುವರೊಮ್ಮೊಮ್ಮೆ ಪರವಶರಾಗಿ ಮೈ ಮರೆದು
ನಲಿವರೊಮ್ಮೊಮ್ಮೆ ನಗುತಾ
ಜಲಜಾಕ್ಷನಮಲ ಮಂಗಳ ಗುಣವ ಕೇಳಿ ಗಂ
ಟಲ ಶಿರಗಳುಬ್ಬಿ ಚಪ್ಪಳೆಗಳಂ ಬಾರಿಸುತ
ಮುಳುಗಿ ಸುಖ ವನಧಿಯೊಳು ತನು ಪುಳಕೋತ್ಪವದಿ
ಇಳೆಯೊಳಗೆ ಸಂಚರಿಪ ಕಲುಷವರ್ಜಿತಂಗೆ 3
ನೋಡುವುದೆ ಹರಿಮೂರ್ತಿ ಕೇಳುವುದೆ ಹರಿಕೀರ್ತಿ
ಆಡುವುದೆ ಹರಿವಾರ್ತೆ ಮಾಡುವುದೆ ಹರಿಪೂಜೆ
ನೀಡುವುದೆ ಅವಧಾನ ಬೇಡುವುದೆ ಪುರುಷಾರ್ಥ
ಕೂಡುವುದೆ ಸಾಯುಜ್ಯವು
ದಾಡಿಯಿಂದಲಿ ದನುಜರಳಿದು ಧರಣಿಯನು ತಂದ
ಕ್ರೋಢರೂಪನೆ ಲೋಕಕ್ಕೆಲ್ಲ ಆನಂದ
ನಾಡಾಡ ದೈವದಂತಿವನಲ್ಲವೆಂದು ಕೊಂ
ಡಾಡುತವನಿಯೊಳು ಸಂಚರಿಸುವ ವಿಪಶ್ಚಿತರಿಗೆ 4
ಕುಟಿಲರಹಿತನು ಧರ್ಮಾರ್ಥ ಮುಕುತಿ ಸಂ
ಘಟಸಲೆಮಗೆಂದು ಸುರನದಿ ಮುಖ್ಯ ತೀರ್ಥ ವೆಂ
ಕಟ ಶೈಲ ಮೊದಲಾದ ಕ್ಷೇತ್ರದಲಿ ಸತ್ಕರ್ಮ
ಹಟದಿಂದ ಮಾಳ್ಪರೆಲ್ಲಾ
ವಟ ಪತ್ರಶಯನನೊಲುಮೆಯನೆ ಬಯಸುವ ಜಾಂಡ
ಕಟಹದ್ಭಹಿವ್ರ್ಯಾಪ್ತನಾದ ಶ್ರೀ ಜಗನ್ನಾಥ
ವಿಠಲನಾವ ದೇಶದಿ ಕಾಲದಲ್ಲಿ ಪಾ
ಸಟೆಯಿಲ್ಲವೆನುತ ಲಾಲಿಸುತಿಪ್ಪರಿಗೆ5
No comments:
Post a Comment