ಶಿವಸುಖ ದಾರಿಯ ನೋಡಣ್ಣಾ ಅದು ಕೂದಲ ಎಳೆಕಿಂತ ಬಲು ಸಣ್ಣಾ\\ ಪ\\
ಭವದಲಿ ಮುಳುಗಿಹ ಪ್ರಾಣಿಯ ಕಾಣದೆ ಘವ ಘವಿಸುವ ಚಿನ್ನದ ಬಣ್ಣಾ \\ಅ.ಪ.\\
ಸಾಸಿವೆ ಕಾಳಿಗೆ ಸಾಸಿರ ಭಾಗಕೆ ಮೀರಿ ಉಳಿದಿಹುದಣ್ಣಾ ||
ಘೋಷ ಸುಶಬ್ದದ ದಶಮದ್ವಾರದಿ ಭಾಸುರ ಪರಮಣು ದ್ವಾರಣ್ಣಾ \\1\\
ಸೂಜಿಯ ಮೊನೆಕಿಂತ ಸೂಕ್ಷಕೆ ಅತೀತನು ಶೂನ್ಯಕೆ ಬೆಳಗುತ್ತಿಹುದಣ್ಣಾ ||
ಈ ಜಗವೆಲ್ಲವು ಮೃಗಜಲದಂದದಿ ಸಚ್ಚಿತ್ಸೂರ್ಯನ ಕಿರಣಣ್ಣಾ \\2\\
ಅನುಭವ ಯೋಗಿಗೆ ಅನುಕೂಲವಾಗಿಹುದನಿಮಿಷ ದೃಷ್ಟಿಲಿ ಬಗೆಯಣ್ಣಾ ||
ಘನಗುರು ಶಂಕರ ತನ್ಮಯನಾಗಿಹ ಚಿನುಮಯ ಗುರುತವೆ ನಿಜವಣ್ಣಾ \\3\\
No comments:
Post a Comment