Labels

Wednesday, 15 January 2020

ದಾಸನ ಮಾಡಿಕೋ ಎನ್ನ - ಇಷ್ಟು daasana maadiko enna


ದಾಸನ ಮಾಡಿಕೋ ಎನ್ನ - ಇಷ್ಟು ಗಾಸಿ ಮಾಡುವುದೇಕೆ ದಯದಿ ಸಂಪನ್ನ ಪ
ದುರುಳ ಬುದ್ದಿಗಳೆಲ್ಲ ಬಿಡಿಸೋ - ನಿನ್ನ ಕರಣ ಕವಚವೆನ್ನ ಹರಣಕ್ಕೆ ತೊಡಿಸೋ ||
ಚರಣದ ಸೇವೆಯ ಕೊಡಿಸೋ - ಅಭಯ- ಕರ ಮೇಲಿನ ಕುಸುಮ ಶಿರದ ಮೇಲಿರಿಸೋ 1
ದೃಢಭಕ್ತಿಯಿಂದ ನಾ ಬೇಡಿ - ನಿನ್ನ ಅಡಿಯೊಳೆರಗುವೆನಯ್ಯ ಅನುದಿನ ಪಾಡಿ ||
ಕಡೆಗಣ್ಣೊಳೇಕೆನ್ನ ನೋಡಿ ಬಿಡುವೆ ಕೊಡು ನಿನ್ನ ಪರಭಕ್ತಿ ಮನ ಮಡಿ ಮಾಡಿ 2
ಮೊರೆಹೊಕ್ಕವರ ಕಾವ ಬಿರುದು ನೀನು ಕರುಣದಿ ರಕ್ಷಣೆ ಮಾಡೆನ್ನ ಪೊರೆದು ||
ದುರಿತ ರಾಶಿಗಳೆಲ್ಲ ತರೆದು ಒಡೆಯ ಪುರಂದರವಿಠಲನೆ ಹರುಷದಿ ಕರೆದು 3


No comments:

Post a Comment