Labels

Thursday, 16 January 2020

ಹೇಳಿದರೆ ನಮ್ಮ ಮೇಲೆ ಯಾಕಮ್ಮ helidare namma mele yaakamma

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ
ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ||
ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ
ಬಣ್ಣಿಸಿ ಕಸ್ತೂರಿ ತಿಲಕವನಿಟ್ಟು
ಚಿಣ್ಣಿಕೋಲು ಚೆಂಡು ಬುಗುರಿ ಕೈಯಲಿಟ್ಟು, ಪೊಸ
ಬೆಣ್ಣೆಯ ಮೆಲ್ಲು ಹೋಗೆಂದು ಕಳುಹಿಬಿಟ್ಟು ||
ಕರೆದು ಕೈಯಲ್ಲಿ ಚಿಟ್ಟೆಬೆಲ್ಲ ಕೊಟ್ಟು, ಚಿಕ್ಕ
ಹರಳುಕಲ್ಲುಗಳನ್ನೆ ಅರಿಸಿ ಕೊಟ್ಟು
ವಾರಿಗೆಯ ಪುಂಡರನ್ನು ಮಾಡಿಕೊಟ್ಟು, ಗೋಪಿ
ಊರನೆಲ್ಲ ಸುಲಿಯೆಂದು ಕಳುಹಿಕೊಟ್ಟು ||
ಹೋಗೆಂದು ರಂಗನ ಕಳುಹಿಕೊಟ್ಟು, ಗೋಪಿ
ಆಗ ಭೋಗಂಗಳೆಲ್ಲ ತುಂಬಿಕೊಟ್ಟು
ನಿಗಮಗೋಚರನೆಂಬ ಪೆಸರನಿಟ್ಟು, ಗೋಪಿ
ಪುರಂದರವಿಠಲನ್ನ ಬೆಳೆಸಿಬಿಟ್ಟು ||

No comments:

Post a Comment