ವಾದಿರಾಜ ಗುರು ನೀ ದಯಮಾಡದೆ
ಈ ದುರಿತಗಳ ಕಳೆದಾದರಿಪರಾರೊ ಪ
ದೈಶಿಕಾರ್ಯ ವಾಗೀಶಕುವರ ತವ
ದಾಸಸಮೂಹವ ನೀ ಸಲಹೋ ಸದಾ 1
ನೀ ಗತಿಯೆಂದನುರಾಗದಿ ನಂಬಿದೆ
ಭೋಗಪತೀಶನ ರೋಗವ ಕಳೆದೆ 2
ಜನ್ಮಾಧಿವಾಧ್ಯುನ್ಮಾದ ಭ್ರಮ
ನಿಮ್ಮ ಮೊರೆ ಹೊಕ್ಕ ಮೇಲಿನ್ನರಲುಂಟೆ 3
ಭೂಮಿಪರುಪಟಳಕಾ ಮಹಿನಾಥನು
ತಾ ಮೈಮರೆದಿರೆ ನೀ ಮುದವಿತ್ತೆ 4
ಮೋದಮುನಿಮತ ಪಯೋದಧಿ ಪೂರ್ಣ
ವಿಧೋದಯ ಶರಣರ ಕಾದುಕೊ ಧೊರಿಯೆ 5
ಕಲಿಬಾಧೆಯು ವೆಗ್ಗಳವಾಗಿದೆ ಕಾಯೊ
ಇಳೆಯೊಳು ಯತಿಕುಲತಿಲಕ ಕೃಪಾಳೊ 6
ನಿನ್ನೊಶನಾದ ಜಗನ್ನಾಥ ವಿಠಲನ
ಉನ್ನಾಹದಲಿ ತೋರೆನ್ನ ಮನದಲಿ 7
No comments:
Post a Comment