Labels

Wednesday, 15 January 2020

ನಂಬಬೇಡ ನಾರಿಯರನು nambabeda naariyaranu


ನಂಬಬೇಡ ನಾರಿಯರನು ಹಂಬಲಿಸಿ ಹಾರಯಿಸಬೇಡ
ಅಂಬುಜಾಕ್ಷಿಯರೊಲುಮೆ ಬಯಲು ಡಂಬಕವೆಂದು ತಿಳಿಯಿರೊ ಪ.
ನೋಟವೆಲ್ಲ ಪುಸಿಯು - ಸತಿಯರಾಟವೆಲ್ಲ ಸಂಚು - ಸನ್ನೆ
ಕೂಟವೆಲ್ಲ ಗನ್ನ - ಘಾತುಕ ನೋಟವೆಲ್ಲ ವಂಚನೆ
ವಾತಬದ್ಧ ಹೆಂಗಳಲ್ಲಿ ಕೋಟಲೆಗೊಂಡು ತಿರುಗಬೇಡ
ಮಾಟಗಾತಿಯರೊಲುಮೆ ಬಯಲು ಬೂಟಕವೆಂದು ತಿಳಿಯಿರೊ 1
ಸೋತನೆಂದು ವಿಟಗೆ ದೈನ್ಯ ಮಾತನಾಡಿ ಮರುಳಗೊಳಸಿ
ಕಾತರವ ಹುಟ್ಟಿಸಿ ಆವನ ಮಾತೆ - ಪಿತರ ತೊಲಗಿಸಿ
ಪ್ರೀತಿ ಬಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಚಾತಿಕಾರ್ತಿ ಹೆಂಗಳೆಯರ 2
ಧರೆಯ ಜನರ ಮೋಹಕೆಳಸಿ ಭರದಿ ನೆಟ್ಟು ಕೆಡಲುಬೇಡ
ಎರೆಳೆಂಗಳ ಹೆಂಗಳೊಲುಮೆ ಗುರುಳೆ ನೀರ ಮೇಲಿನ
ಮರೆಯಬೇಡ ಗುರುಮಂತ್ರವ ಸ್ಥಿರವಿಲ್ಲದ ಜನ್ಮದಲ್ಲಿ
ಕರುಣನಿಧಿ ಪುರಂದರವಿಠಲನ ಚರಣ ಸ್ಮರಣೆ ಮಾಡಿರೊ 3


No comments:

Post a Comment