Labels

Wednesday, 15 January 2020

ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ dhwajada timmappa pallakkiyeri


ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ  ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ ಪ.
ಬಲದಲಬುಜಭವ ಭವಾದಿಗಳೆಡದಲಿ  ಉಲಿವ ವೇದ - ಉಪನಿಷದುಗಳು ||
ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ  ಹಲವು ಋಷಿ - ಮುನಿನಿಕರ ಹಿಂದೆ ಬರುತಿರಲು 1
ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ  ಚಿತ್ತಜಾತನು ವ್ಯಜನವ ಬೀಸಲು ||
ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು ಹಸ್ತದ ಕಾಳಂಜಿ ಹರಿಣಾಂಕನು ಬರೆ 2
ವರುಣನು ಸ್ವಾದುಜಲವ ಪಿಡಿದು ಬರೆ  ತರುಣಿ ತನಗೆ ಆಧಾರದಂತಿರಲು ||
ಸುರರು ಸುಮನಗಳಿಂದ ಸರ್ವರು ತಮತಮ್ಮ  ಪರಿಪರಿ ಆಯುಧಗೊಂಡು ಬಳಸಿಬರೆ 3
ಮಂದರ ಮಧ್ಯಮ ತಾರಕ ಮೋಹನ  ದಿಂದ ಗಂಧರ್ವರು ಗಾನಮಾಡೆ ||
ತೋಂಧಿಮಿಧಿಮಿಕೆಂದು ತಾಳಮೇಳದೆ ನಾರಂದ ಪಾಡಲು ಆಡುತಾಡುತ ಬರುತಿರೆ 4
ಲೋಕನಾಯಕ ಲೋಕೈಕ ರಕ್ಷಾಮಣಿ  ಸಾಕಾರರೂಪ ಸದ್ಗುಣಭರಿತ ||
ವೆಂಕಟೇಶ ವ್ಯಾಸಮುನಿವರದನಾದ ಕರುಣಾಕರ ಪುರಂದರವಿಠಲನು ಗರುಡ 5


No comments:

Post a Comment