Labels

Wednesday, 8 January 2020

ಸಾಂಬ ಶ್ರೀವಾಹನ ಕುಂಟೋಜೀಶಾ samba shree vahana


ಸಾಂಬ ಶ್ರೀವಾಹನ ಕುಂಟೋಜೀಶಾ samba shree vahana


ಸಾಂಬ ಶ್ರೀವಾಹನ ಕುಂಟೋಜೀಶಾ ಸುಂದರ ಬಸವೇಶಾ  \\ಪ\\
ಜಗದೊಳಗಿಹ ಜನರಘನಾಶ  ಸುಗಮದಿ ಕಡಿವನು ಭವದ ಪಾಶ  ಅಗಣಿತ ಶಿವಗಣರೊಳು ಮೆರೆವ ಅವಿನಾಶ \\ 1\\
ಗಳ ಬೆನ್ನವನಿತ್ತು ಪರೇಶ  ಮಾಳ ಹೊಲಗಳ ನಡಿಸುವನೀಶ  ತಿಳಿ ಮನದೊಳು ಬೆಳಗುವ ಜ್ಯೋತಿ ಪ್ರಕಾಶ  \\2\\
ಧರಣಿಗಧಿಕವಾದ ಕೈಲಾಸ  ಪೊರೆವುತ ಕುಂಟೋಜ ನಿವಾಸಾ  ಸ್ಥಿರವಾಗಲು ಶಂಕರಗಾಯಿತು ಉಲ್ಹಾಸ ಸುಂದರ ಬಸವೇಶ  \\3\\|

No comments:

Post a Comment