Labels

Wednesday, 15 January 2020

ಧನವಗಳಿಸಬೇಕಿಂತಹದು - ಈ dhanavagalisa Bekintihadu


ಧನವಗಳಿಸಬೇಕಿಂತಹದು - ಈ ಜನರಿಗೆ ಕಾಣಿಸದಂತಹದು ಪ.
ಕೊಟ್ಟರೆ ತೀರದಂತಹದು - ತನ್ನ ಬಿಟ್ಟು ಅಗಲಿ ಇರದಂತಹದು
ಕಟ್ಟಿದ ಗಂಟನು ಬಯಲೊಳಗಿಟ್ಟರೆ ಮುಟ್ಟರು ಆರು ಅಂತಹದು 1
ಕರ್ಮವ ನೋಡಿಸುವಂತಹದು ಧರ್ಮವ ಮಾಡಿಸುವಂತಹದು
ನಿರ್ಮಲವಾಗಿದೆ ಮನಸಿನೊಳಗೆ ನಿಜ ಧರ್ಮವ ತೋರಿಸುವಂತಹದು 2
ಅಜ್ಞಾನವು ಬಾರದಂತಹದು - ನಿಜಸುಜ್ಞಾನವ ತೋರುವಂತಹದು
ವಿಜ್ಞಾನಮೂರ್ತಿ ಪುರಂದರವಿಠಲನ ಪ್ರಜ್ಞೆಯನ್ನು ಕೊಡುವಂತಹದು 3


No comments:

Post a Comment