Labels

Wednesday, 18 December 2019

ವೆಂಕಟರಮಣ ವೇದಾಂತ ನಿನ್ನಯ venkataramana vedanta ninnaya

ವೆಂಕಟರಮಣ ವೇದಾಂತ ನಿನ್ನಯ ಪಾದಪಂಕಜ ಕಂಡ ಮೇಲೆ- ಇಂಥಮಂಕುಜನರ ಬೇಡಿಸುವುದುಚಿತವೇಶಂಖಚಕ್ರಾಂಕಿತನೇ ಪಕ್ಷೀರಸಾಗರ ಮಥನಿಸಿ ಪೊಂದಿದಾತಗೆನೀರು ಮಜ್ಜಿಗೆ ಕಡವೆ ||ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತಂಗೆದೋರೆ ತ್ರಿಂತ್ರಿಣಿ ಬಯಕೆ?1
ಸಾರ್ವಭೂಪಾಲನ ಸೂನುವೆನಿಸಿಕೊಂಡುಸೋರೆ ಕೂಳಿನ ತಿರುಕೆ ||ನಾರಿ ಲಕ್ಷ್ಮೀಕಾಂತ ನಿನ್ನ ನಂಬಿದವಗೆದಾರಿದ್ರ್ಯದಂಜಿಕೆಯೆ? 2
ಸುರನದಿಯಲಿ ಮಿಂದು ಶುಚಿಯಾದ ಬಳಿಕಿನ್ನುತೀರ್ಥದ ಅಟ್ಟುಳಿಯೇ ||ಕರುಣಾನಿಧಿಯೆಂದು ಮೊರೆಹೊಕ್ಕ ದಾಸಗೆದುರಿತದ ದುಷ್ಫಲವೆ? 3
ಗರುಡನ ಮಂತ್ರವ ಕಲಿತು ಜಪಿಸುವಂಗೆಉರಗನ ಹಾವಳಿಯೆ ||ಹರಿಯ ಪಕ್ಕದೊಳು ಮನೆ ಕಟ್ಟಿದಾತಂಗೆಕರಿಗಳ ಭೀತಿಯುಂಟೆ?4
ಪರಮ ಪುರುಷ ಸುಗುಣಾತ್ಮಕ ನೀನೆಂದುಮೊರೆಹೊಕ್ಕೆ ಕಾಯೊ ಎನ್ನ ||ಉರಗಾದ್ರಿವಾಸ ಶ್ರೀ ಪುರಂದರವಿಠಲನೆಪರಬ್ರಹ್ಮ ನಾರಾಯಣ 5

No comments:

Post a Comment