Labels

Friday, 3 January 2020

ಇಲ್ಲಿಗೇತಕೆ ಬಂದೆಯೋ ಮಾನವ illigetake bandeyo maanava



ಇಲ್ಲಿಗೇತಕೆ ಬಂದೆಯೋ ಮಾನವ
ಇಲ್ಲಿರಲು ಶಾಶ್ವತ ಸಾಧ್ಯವೇ ಹೇಳೋ ಪ
ಬರಲಿಲ್ಲ ಕೇಳಿ ನೀನು ಹೇಳಿ ಹೋಗುವನಲ್ಲ
ಇರಲು ಇಲ್ಲಿ ನಿನಗೇಕೆ ಚಿಂತೆ ಕಾಡುತಿಹುದಯ್ಯ ಅ.ಪ
ಜವನು ನಿನ್ನ ಬೇಡವೆಂದರೂ ಒಯ್ಯುವನಯ್ಯ
ಅವನ ಪಾಲಿಗೆ ನೀನು ಅನ್ನವಾಗಿ ನಿಂತಿರುವೆ
ದೈವ ಕಮಲಾಕ್ಷನಿಗೆ ಅವನು ಉಪ್ಪಿನಕಾಯಿ
ಅವನ ಚರಣ ಪಿಡಿದು ಬರುವುದೇನಿದೆ ನೋಡೋ 1
ನಂಬು ರಾಮನ ಮಾತನು ಕೃಷ್ಣ ಹಾಡಿದ ಹಾಡನು
ನಂಬಿ ಬಾಳಯ್ಯ ನೀನು ಪದುಮನಾಭನ ಚರಣ
ತಂಬಿ ಕೇಳೋ ಧರಣಿನಾಥನೆ ಕರುಣೆ ಸಾಗರನಯ್ಯ
ನಂಬು ಶೆಲ್ವರಾಯನೆ ದೇವ ಮುಕುತಿದಾತನು ಅವನೆ 2


No comments:

Post a Comment