ನೆರೆನಂಬಿ ಪಡೆಯಿರೊ ಹಿತವ ನಮ್ಮಗುರು ಮಧ್ವಮುನಿಯ ಸಮ್ಮತವ ||pa||
ತ್ರೇತೆಯೊಳಂಜನೆತನಯನಾಗಿಸೀತಾರಮಣ ರಘುಪತಿಗತಿಪ್ರಿಯದೂತತನದಿ
ಖಳತತಿಯ ಕೊಂದುಖ್ಯಾತಿ ಪಡೆದ ಹನುಮಂತನಾದ ಯತಿಯ||1||
ದ್ವಾಪರದಲಿ ಭೀಮನೆನಿಸಿ ಪಾಂಡು-ಭೂಪನರಸಿ ಕುಂತಿ ಉದರದಿ ಜನಿಸಿ
ಶ್ರೀಪತಿಗರ್ಥಿಯ ಸಲಿಸಿ ದೈತ್ಯ-ರೂಪ ನೃಪನ ಕೊಂದ ಮುನಿಪನ ಭಜಿಸಿ||2||
ಕಲಿಯುಗದಲಿ ಯತಿಯಾಗಿ ಈಇಳೆಯ ದುಶ್ಶಾಸ್ತ್ರವ ಜರಿದವರಾಗಿಕುಲಗುರು
ಮಧ್ವಪತಿಮುನಿಯೋಗಿ ನಮ್ಮಬಲು ಹಯವದನನ ಬಂಟನೆಂದು ಬಾಗಿ||3||

No comments:
Post a Comment