Labels

Friday, 6 December 2019

ನೀ ಮಾಯೆಯೊಳಗೊ nee maayeyolago

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೋ
ನೀ ದೇಹದೊಳಗೋ, ನಿನ್ನೊಳು ದೇಹವೋ ||


ಬಯಲು ಆಲಯದೊಳಗೊ, ಆಲಯವು ಬಯಾಲೊಳಗೊ
ಬಯಲು ಆಲಯವೆರಡು ನಯನದೊಳಗೋ
ನಯನ ಬುದ್ಧಿಯೊಳಗೋ, ಬುದ್ಧಿ ನಯನದೊಳಗೋ
ನಯನ ಬುದ್ಧಿಗಳೆರಡು ನಿನ್ನೊಳಗೋ ಹರಿಯೇ||1||


ಸವಿಯು ಸಕ್ಕರೆಯೊಳಗೋ, ಸಕ್ಕರೆಯು ಸವಿಯೊಳಗೋ
ಸವಿಯು ಸಕ್ಕರೆಯರಡು ಜಿಹ್ವೆಯೊಳಗೋ
ಜಿಹ್ವೆ ಮನಸಿನೊಳಗೋ, ಮನಸು ಜಿಹ್ವೆಯೊಳಗೋ
ಜಿಹ್ವೆ ಮನಸುಗಳೆರಡು ನಿನ್ನೊಳಗೋ ಹರಿಯೇ||2||


ಕುಸುಮದೊಳು ಗಂಧವೋ, ಗಂಧದೊಳು ಕುಸುಮವೋ
ಕುಸುಮ ಗಂಧಗಳೆರಡು ಆಘ್ರಾಣದೊಳಗೋ
ಅಸಮಭಾವ ಕಾಗಿನೆಲೆಯಾದಿ ಕೇಶವರಾಯ

ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ ಹರಿಯೇ||3|

No comments:

Post a Comment