ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನುಮರೆಯದೆ ಸಲಹೆನ್ನ ವರದಾ ಪಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆಪರಂದೇವಿ ವಲ್ಲಭನೆ ವರದಾ ಅ
ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳುಹಂಬಲಿಸಿ ನಾ ಬಂದೆ ವರದಾಅಂಬುಜೋದ್ಭವನ ಬರೆಹವ ಮೀರಲಾರದೆ ನರಬೊಂಬೆ ಗರ್ಭದೊಳಿದ್ದೆ ವರದಾ 1
ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವಸಂಭ್ರಮದೊಳಿದ್ದೆ ನಾ ವರದಾಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈಕುಂಭಿನಿಗೆ ನಾ ಬಂದೆ ವರದಾ 2
ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ ಕುಶಲದಾಟವ ಕಲಿತೆ ವರದಾಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮತೃಷೆಗೆ ನಾನೊಳಗಾದೆ ವರದಾ 3
ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮವಶನಾಗಿ ನಾನಿದ್ದೆ ವರದಾಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನಬಿಸರುಹಾಕ್ಷನೆ ಕಂಚಿ ವರದಾ 4
ಗುರು ಹಿರಿಯರ ಕಂಡು ಸರಿಸಮಾನದಿ ನಾನುಬೆರೆದುಕೊಂಡಿದ್ದೆನೋ ವರದಾನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿನರನರಳಿ ಬೆಂಡಾದೆ ವರದಾ 5
ಕಾಸಿಗಾಸೆಯ ಪಟ್ಟು ಸಹಸ್ರ ಲಕ್ಷದ ಪುಸಿಯಬೇಸರಿಸದೆ ಬೊಗಳಿದೆ ವರದಾವಿಶೇಷ ನಿಮ್ಮಂಘ್ರಿಯ ನಂಬಲಾರದೆ ಕೆಟ್ಟದೋಷಕನು ನಾನಾದೆ ವರದಾ 6
ಪಂಚೇಂದ್ರಿಯಗಳೊಳಗೆ ಸಂಚರಿಸುವೀ ಮನವುಕೊಂಚ ಗುಣಕೆಳೆಯುತಿದೆ ವರದಾಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥಪಂಚಪಾತಕನುಂಟೆ ವರದಾ 7
ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರಪಂಚೆಯಲ್ಲಿರಿಸೆನ್ನ ವರದಾಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರಪಂಚವನು ಬಿಡಿಸೆನ್ನ ವರದಾ 8
No comments:
Post a Comment