ಮಗುವಿನ ಮರುಳಿದು ಬಿಡದಲ್ಲ - ಈ ಪ
ಜಗದೊಳು ಪಂಡಿತರಿದ ಬಿಡಿಸಿ ಅ
ನೀರನು ಕಂಡರೆ ಮುಳುಗುತಿದೆ - ತನ್ನಮೋರೆಯ ತೋರದೆ ಆಡುತಿದೆಧಾರಿಣಿ ಹಲ್ಲಲಿ ಎಳೆಯುತಿದೆ - ದೊಡ್ಡಭೈರವಾಕಾರದಿ ಕೂಗುತಿದೆ 1
ಪೊಡವಿಯ ಕೊಟ್ಟಗೆ ಅಳೆಯುತಿದೆ - ತನ್ನಕೊಡಲಿಯೊಳು ಭೂಪರ ಕಡಿಯುತಿದೆಅಡವಿ ಕೋತಿಗಳ ಕೂಡುತಿದೆ - ಚೆಲ್ವಮಡದಿಯರನು ಹಿಡಿದೆಳೆಯುತಿದೆ 2
ಉಟ್ಟಿದ್ದ ವಸ್ತ್ರವ ಬಿಸುಡುತಿದೆ - ತನ್ನದಿಟ್ಟ ತೇಜಿಯನೇರಿ ನಲಿಯುತಿದೆಸೃಷ್ಟಿಯೊಳು ಭೂಸುರರ ಪೊರೆದ ಜಗಜಟ್ಟಿಯಾದಿಕೇಶವ ರಾಯನಂತೆ 3
No comments:
Post a Comment