Labels

Friday, 6 December 2019

ಏಕಾರತಿಯ ನೋಡುವ ಬನ್ನಿ ekaratiya nodava banni

ಏಕಾರತಿಯ ನೋಡುವ ಬನ್ನಿ ||ಪ|
ನಮ್ಮ ಲೋಕನಾಥನ ಸಿರಿ ಪಾದಕ್ಕೆ ಬೆಳಗುವ ||ಅ.ಪ||
ಹರುಷದಿಂದ ಏಕಾರತಿಯ ಬೆಳಗಲು
ನರಕದಿಂದುದ್ಧಾರ ಮಾಡುವನು
ಪರಮ ಭಕುತಿಯಿಂದ ನರರನು
ಹರಿ ತನ್ನ ಉದರದೊಳಿರಿಸುವನು||1||
ತುಪ್ಪದೊಳ್ಬೆರೆಸಿದ ಮೂರು ಬತ್ತಿಯನಿಟ್ಟು
ಒಪ್ಪುವ ದೀಪಕೆ ದೀಪ ಹಚ್ಚಿ
ತಪ್ಪದೆ ಸಕಲ ಪಾಪಗಳ ಸಂಹರಿಸುವ
ಅಪ್ಪ ವಿಟ್ಟಲನ ಪಾದಕ್ಕೆ ಬೆಳಗುವ||2||
ಅನ್ಯ ಚಿಂತೆಯ ಮಾಡದನ್ಯರ ಭಜಿಸದೆ
ಅನ್ಯ ದೇವರ ಸ್ಮರಿಸದಲೆ
ಅನನ್ಯನಾಗಿ ಶ್ರೀ ಪುರಂದರ ವಿಟ್ಟಲನ್ನ
ಘನ್ನ ನಾಮಂಗಳ ಧ್ಯಾನಿಸುತ್ತಲಿನ್ನು||3||

No comments:

Post a Comment