Labels

Tuesday, 17 December 2019

ವಿಷಯದ ವಿಚಾರ ಬಿಡು vishayada vichara bidu

ವಿಷಯದ ವಿಚಾರ ಬಿಡು ವಿಹಿತಕರ್ಮವ ಮಾಡು |
ವೈರಾಗ್ಯ ಭಾಗ್ಯಬೇಡು ಪ.
ವಿಷವೆಂದು ಕಾಮ - ಕ್ರೋಧಗಳೆಲ್ಲವೀಡಾಡು |
ಮಸಣಮನವೇ ಮಾಧವನನು ಕೊಂಡಾಡು ಅಪ
ಅನುದಿನದಿ ಹರಿಕಥೆಯ ಕೇಳಿ ಸಂತೋಷಪಡು |
ದಿನದಿನವು ಸಜ್ಜನರ ಕೂಡು ||
ಮನಮುಟ್ಟಿ ದುರಾಚಾರ ಮಾಳ್ಪರನು ನೀ ಕಾಡು |
ಹಣ - ಹೊನ್ನು ಪರಹೆಣ್ಣು ಹೆಂಟೆಯಂತೆ ನೋಡು 1
ವೇದ ಶಾಸ್ತ್ರಾರ್ಥ ತತ್ವದ ವಿಚಾರವ ಮಾಡು |
ಮಾಧವನ ಭಕ್ತಿ ಬೇಡು ||
ಪಾದದಲಿ ಪುಣ್ಯತೀರ್ಥದ ಯಾತ್ರೆಮಾಡು ಮಧು - |
ಸೂದನನ ಕೀರ್ತಿ ಸಂಕಿರ್ತನೆಯ ಮಾಡು 2
ಅಂಬುಗುಳ್ಳಗಳಂತೆ ಎಂದಿಗಿದ್ದರು ದೇಹ |
ನಂಬಿ ನೀ ಕೆಡಲುಬೇಡ ||
ಕೊಂಬುವರು ಬಂದರಾಕ್ಷಣಕೆ ಬೆಲೆಯಾಗುವುದು |
ಅಂಬುಜಾಕ್ಷ ಪುರಂದರವಿಠಲನ ನೆನೆ ಮನವೆ 3

No comments:

Post a Comment