ವೈದ್ಯವ ನಾನರಿಯೆ - ಭವರೋಗದ-|
ವೈದ್ಯ ನೀನೆ ಹರಿಯೆ ಪ
ನೀ ದಯದಿಂದೆನ್ನ ರಕ್ಷಿಸು-
ಆದಿವೈದ್ಯ ಮುನ್ನ |
ಪಾದೋದಕವನು ಎನಗೆ ಕೊಡಿಸು ಸರ್ವ-||
ವ್ಯಾಧಿನಿವಾರಣ ಕಷಾಯ ನೀ ಕೊಡು 1
ಹರಿ ನಿನ್ನ ಕರುಣವೆಂಬ-ಸ್ಮರಣೆಯ |
ತ್ವರಿತ ಙÁ್ಞನದಿಂದ ||
ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||
ದುರಿತನಿವಾರಣ ಕಷಾಯ ನೀ ಕೊಡು 2
ಕೃಷ್ಣ ನೀ ಕೃಪೆವಿಡಿದು-ಕಪಟದ-|
ಉಷ್ಣವಾಯುವಳಿದು ||
ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |
ಇಷ್ಟವ ಸಲಿಸುವ ತೃಪ್ತಿಪಡಿಸುವಂಥ 3
ನಿನ್ನ ದಾಸ ನಾನು-ದುರಿತಗ-|ಸ
ಳೆನ್ನ ಕಾಡುವುವೇನು ||
ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|
ವನ್ನು ಮಾಡಿ ಶ್ರೀಹರಿ ಸಲಹೆನ್ನನು4
ಪಂಡಿತ ದಯಾಸಿಂಧು-ಕಾಡುವ-|
ಪಾಂಡುರೋಗ ಕೊಂದು ||
ಪುಂಡರೀಕಾಕ್ಷ ಶ್ರೀಪುರಂದರವಿಠಲ ಅ-|ಖಂಡಮೂರುತಿ ಶ್ರೀಹರಿ ಸಲಹೆನ್ನನು 5
No comments:
Post a Comment