Labels

Tuesday, 10 December 2019

ತೇರನೇರಿ ಮೆರೆದು ಬರುವ teraneri meredu baruva

ತೇರನೇರಿ ಮೆರೆದು ಬರುವ ಭೂಸುರವಂದ್ಯ ಯಾರಕ್ಕ ಕ|
ಗುರು ರಾಘವೇಂದ್ರರೆಂತೆಂಬೋ ಯತಿ ಕುಲ ತಿಲಕ  ಕೇಳ್ತಾಂಗಿ ||ಪ||

ಚಂದದಿ ಕುಂದನ ಮುಕುಟವ ಧರಿಸಿದ ಸುಂದರನೀತ ಯಾರಕ್ಕ|
ತಂದೆಯ ಆಘಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಾಂಗಿ ||1||

ವಿಪ್ರರು ದಾಸರು ಯತಿತತಿಗಳ ಕೂಡಿ ಬರುತಿಹ ನೀತ ಯಾರಕ್ಕ|
ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ವ್ಯಾಸರಾಯ ಕೇಳ್ತಾಂಗಿ ||2||

ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ|
ಹರುಷದಿ ಆನಂದ ವಿಠಲನ ಸಾರಿದ ಪರಿಮಳ ರಾಯ  ಕೇಳ್ತಾಂಗಿ ||3

No comments:

Post a Comment