ಶರಣು ಶರಣು ವಿನಾಯಕಶರಣು ವಿದ್ಯಾ ಪ್ರದಾಯಕ ಪಶರಣು ಪಾರ್ವತಿ ತನಯ ಮೂರುತಿಶರಣು ಮೂಷಕ ವಾಹನ ಅ.ಪನಿಟಿಲ ನೇತ್ರನೆ ವರದ ಸುತನೆ ನಾಗ ಯಜ್ಞೋಪವೀತನೆಕಟಿಯ ಸೂತ್ರದ ಕೋಮಲಾಂಗನೆ ಕರ್ಣಕುಂಡಲಧಾರನೆ 1
ಬಟ್ಟ ಮುತ್ತಿನ ಪದಕ ಹಾರನೆ ದಿವ್ಯಬಾಹು ಚತುಷ್ಕನೆಇಟ್ಟ ತೊಡುಗೆಯ ಹೇಮ ಕಂಕಣ ಪಾಶ-ಅಂಕುಶಧಾರನೆ 2ಕುಕ್ಷಿ ಮಹಾ ಲಂಬೋದರನೆ ಇಕ್ಷುಚಾಪನ ಗೆಲಿದನೆ
ಪಕ್ಷಿ ವಾಹನನಾದ ಪುರಂದರ ವಿಠಲನ ನಿಜದಾಸನೆ3
No comments:
Post a Comment