ರಂಗನೆಂಥವನೆಂಥವನೆಲೆ ತಂಗಿ ಪರಂಗನೆಂಥವ ಅವನಂಗ ತಿಳಿಯದು ಬ್ರಹ್ಮಾದಿಗಳಿಗೆ ಅ.ಪಆಗಮವ ತಂದಿಹನೆ | ರಂಗ |ಬೇಗದಿ ಗಿರಿಯ ಪೊತ್ತಿಹನೆ ||ಮೂಗಿಂದ ಭೂಮಿಯ ಕಿತ್ತಿಹನೆ | ಕಂದ |ಕೂಗಲು ಕಂಬದಿ ಬಂದ ಕಾಣಕ್ಕ 1
ಧರಣಿಯ ಈರಡಿ ಮಾಡಿದನ | ಭೂ |ಸುರರಿಗೆ ದಾನವ ನೀಡಿದನೆ ||ನೆರೆದು ಕಪಿಹಿಂಡು ಕೂಡಿದನೆ |ಫಣಿ |ಶಿರದಲ್ಲಿ ಕುಣಿ ಕುಣಿದಾಡಿದನಕ್ಕ 2
ಉಟ್ಟದ್ದು ಬಿಟ್ಟು ತಾ ನಿಂತಿಹನೆ | ರಂಗ |ದಿಟ್ಟಾದ ಕುದುರೆಯನೇರಿದನೆ ||ದುಷ್ಟರನೆಲ್ಲ ಅಳಿದಿಹನೆ | ನಮ್ಮ |ಬಿಟ್ಟಾದಿ ಪುರಂದರವಿಠಲ ಕಾಣಕ್ಕ * 3
No comments:
Post a Comment