ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ ಪ
ಭೂಮಿ ಆಕಾಶ ಪೊತ್ತೊ ಆಕಾಶ ಭೂಮಿಯ ಪೊತ್ತೊಭೂಮಿಯು ಮುಂದೊ ಆಕಾಶ ಮುಂದೊ ಸ್ವಾಮಿ 1
ತತ್ತಿ ಹಕ್ಕಿಯ ಪೊತ್ತೊ ಹಕ್ಕಿ ತತ್ತಿಯ ಪೊತ್ತೊತತ್ತಿಯು ಮುಂದೊ ಹಕ್ಕಿಯು ಮುಂದೊ ಸ್ವಾಮಿ 2
ಬೀಜ ವೃಕ್ಷವ ಪೊತ್ತೊ ವೃಕ್ಷ ಬೀಜವ ಪೊತ್ತೊಬೀಜವು ಮುಂದೊ ವೃಕ್ಷವು ಮುಂದೊ ಸ್ವಾಮಿ 3
ಗಂಡ ಹೆಂಡಿರ ಪೊತ್ತೊ ಹೆಂಡಿರು ಗಂಡನ ಪೊತ್ತೊಗಂಡನು ಮುಂದೊ ಹೆಂಡಿರು ಮುಂದೊ ಸ್ವಾಮಿ4
ಕನಕನು ಹೇಳಿದ ಬೆಡಗಿದು ಕಂಡವರೆಲ್ಲರುಮನದಲಿ ಚಿಂತಿಸಿ ಮಥಿಸಿ ನವನೀತ ಕಾಣಿರಿ 5
No comments:
Post a Comment