Labels

Saturday, 7 December 2019

ಮಂಗಳಾರತಿಯ ಪಾಡಿರೆ mangalaratiya paadire

ಮಂಗಳಾರತಿಯ ಪಾಡಿರೆ ಮಾನಿನಿಯರು ಪ
ಅಂಧಕನನುಜನ ಕಂದನ ತಂದೆಯಕೊಂದನ ಶಿರದಲಿ ನಿಂದವನಚಂದದಿ ಪಡೆದವನ ನಂದನೆಯಳ ನಲವಿಂದ ಧರಿಸಿದ ಮುಕುಂದನಿಗೆ 1
ರಥವನಡರಿ ಸುರ ಪಥದಲಿ ತಿರುಗುವನಸುತನಿಗೆ ಶಾಪವನಿತ್ತವನಖತಿಯನು ತಡೆದನ ಸತಿಯ ಜನನಿ ಸುತನಸತಿಯರನಾಳಿದ ಚತುರನಿಗೆ 2
ಹರಿಯ ಮಗನ ಶಿರ ತರಿದನ ತಂದೆಯಹಿರಿಯ ಮಗನ ತಂದೆಯ ಪಿತನಭರದಿ ಭುಜಿಸಿದವನ ಶಿರದಲಿ ನಟಿಸಿದವರ ಕಾಗಿನೆಲೆಯಾದಿಕೇಶವಗೆ 3

No comments:

Post a Comment