ಅನಘಾನೆಂದೊಮ್ಮೆ ನೆನೆದು ಮಾನವ ಪಾಪ
ವನಧಿ ದಾಟುವ ಬಹುವೇಗದಿಂದ
ಜನನ ಮರಣ ಭಯವಿನಿತಿಲ್ಲಾ ಅವನೆ ಸ
ಜ್ಜನ ಶಿರೋಮಣಿ ಕಾಣೊ ಸರ್ವರೊಳು
ಜನಕ ಜನನಿ ಮೊದಲಾದ ನೂರೊಂದು ಕುಲವ ಪಾ
ವನಿತಾದಿ ವಿಷಯಗಳನನುಭವಿಸುತ ತನ್ನ
ಮನೆಯೊಳಿರಲವ ಜೀವನ ಮುಕ್ತನೊ
ಸನಕಾದಿ ಮುನಿಗಳ ಮನಕೆ ನಿಲುಕದಿಪ್ಪ
ಘನ ಮಹಿಮನೆ ಬಂದು ಕುಣಿವ ಮುಂದೆ
ಹನುಮವಂದಿತ ಜಗನ್ನಾಥವಿಠ್ಠಲರೇಯ
ಅನಿಮಿತ್ತ ಬಂಧು ನೀನು ಆವಾವ ಕಾಲದಲ್ಲಿ 1
No comments:
Post a Comment