Labels

Saturday, 7 December 2019

ಆದಿತ್ಯದೇವ ತ್ವತ್ಪಾದಯುಗಳಕಭಿ aadityadeva tvafpadayugalu

ಆದಿತ್ಯದೇವ ತ್ವತ್ಪಾದಯುಗಳಕಭಿ
ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ
ವ್ಯಾಧಿಯ ಕಳೆದು ಸುಖವೀಯೊ 1
ಸಂe್ಞÁರಮಣ ನಿನಗೆ ವಿe್ಞÁಪಿಸುವೆನೊ ಸ
ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ
ಹ್ಮe್ಞÁನ ಭಕುತಿ ಕರುಣೀಸೊ 2
ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ
ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ
ನಾರಾಧನೆಯನಿತ್ತು ಕರುಣೀಸೊ 3
ರೋಹಿಣೀರಮಣ ಮದ್ದೇಹಗೇಹಾದಿಗಳ
ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ
ವಾಹನನ ಸ್ಮರಣೆಯನು ಕರುಣೀಸೊ 4
ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ
ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ
ಹಾರ ಗೈಸೆನ್ನ ಭವತಾಪ 5
ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ
ದ್ಭøತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ
ಹೃತ್ತಿಮಿರ ಕಳೆದು ಸಂತೈಸೊ 6
ಕೋಲ ಭೂನಂದನ ಪ್ರವಾಳ ಸಮವರ್ಣ ಕರ
ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ
ಮೌಳಿ ನೀಯೆನ್ನ 7
ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ
ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ
ಅಂಗಾರವರ್ಣ ಅನುದಿನ 8
ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ
ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ
ಕಾಮಿತಾರ್ಥವನೆ ಕರುಣೀಸೊ 9
ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ
ಕ್ಷುಧೆಯ ಸಂಹರಿಸಿ ಸುe್ಞÁನ | ಸುe್ಞÁನ ಸದ್ಭಕ್ತಿ
ಸುಧೆಯ ಪಾನವನೆ ಕರುಣೀಸೊ 10
ಚಂದ್ರನಂದನ ಸತತ ವಂದಿಸುವೆ ಮನ್ಮನದ
ಸಂದೇಹ ಬಿಡಿಸಯ್ಯಾ ಮಮದೈವ |
ಮಮದೈವ ಸರ್ವ ಗೋ
ವಿಂದನಹುದೆಂದು ತಿಳಿಸಯ್ಯಾ 11
ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು
ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ
ದ್ಧಾರಗೈಸೆನ್ನ ಭವದಿಂದ 12
ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು
ರ್ಮತಿಯ ಪರಿಹರಿಸಿ ಸುe್ಞÁನ ಸುe್ಞÁನವಿತ್ತು ಶ್ರೀ
ಪತಿಯ ತೋರೆನ್ನ ಮನದಲ್ಲಿ 13
ಸುರರಾಜಗುರುವೆ ತ್ವಚ್ಚರಣಾರವಿಂದಗಳಿ
ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ
ಣರ ಸಂತೈಸೋ ದಯದಿಂದ 14
ತಾರಾರಮಣನೆ ಮದ್ಬಾರ ನಿನ್ನದೊ ಮಹೋ
ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ
ವಾರಿಸಿ ತೋರೊ ತವರೂಪ 15
ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ
ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ
ಪ್ರಕ್ರಿಯವ ತಿಳಿಸೊ ಪ್ರತಿದೀನ 16
 ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ
ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ
ಶ್ರವಣ ಸುಖವೆನಗೆ ಕರುಣೀಸೊ | 17
ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ
ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ
ಲಗದಲ್ಲಿ ಬುದ್ಧಿಯಿರಲೆಂದು 18
ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ
ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ
ತ್ವರಿತದಿಂದಿಳಿಸಿ ಪೊರೆಯೆಂದು 19
 ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ
ಆಯಾಸಕೊಡುವ ಸಮಯದಿ |
ಸಮಯದಿ ಶ್ರೀ ಲಕ್ಷ್ಮೀನಾ
ರಾಯಣನ ಸ್ಮರಣೆ ಕರುಣೀಸೊ 20
ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ
ಹೃದಯವದನದಲಿ ಹರಿಮೂರ್ತಿ |
ಹರಿಮೂರ್ತಿ ಕೀರ್ತನೆಗೆ
ಳೊದಗಲೆನಗೆಂದು ಬಿನ್ನೈಪೆ 21
ಅಹಿಕ ಪಾರತ್ರಿಕದಿ ನರಹರಿಯದಾಸರ ನವ
ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು
ಅಹಿತರೆಂದೆನುತ ಕೆಡಬೇಡಿ22
 ಜಗನ್ನಾಥವಿಠ್ಠಲನ ಬದಿಗರಿವರಹುದೆಂದು
ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ
ಸುಗತಿಗಳನಿತ್ತು ಸಲಹೋರು 23
_____

No comments:

Post a Comment