ಅಂಬುಧಿ ತೊಟ್ಟಲಾಗೆ ಆಲದೆಲೆಯಾಗಿ |
ಅನಂತ ಮೃದುಹಾಸಿಗೆಯಾಗಿ ಅಯ್ಯ |
ವೇದ ನೇಣುಗಳಾ ವೇದಾಂತದೇವಿಯರು |
ಪಾಡಿ ಮುದ್ದಾಡಿ ತೂಗುವರಾಗಿ |
ಆನಂದ ಗೋಪಿಯರು ಇನ್ನೆಂಥ
ಪರಮಾನಂದವನುಂಬರೊ |
ಪುರಂದರವಿಠಲ ಬಲ್ಲನಯ್ಯ | 1
ಮಟ್ಟ ತಾಳ
ಜೋ ಜೋ ಜೋ ಎನ್ನ ಸಿರಿಹರಿ ಮೂರುತಿ |
ಜೋ ಜೋ ಜೋ ಎನ್ನ ಬೊಮ್ಮದ ಮರಿಯೆ |
ಜೋ ಜೋ ಜೋ ಎನ್ನ ಪುರಂದರವಿಠಲ |
ಜೋ ಜೋ ಜೋ ಎನ್ನ ಎನ್ನ ತಮ್ಮ ದಮ್ಮಯ್ಯ
ಜೋ ಜೋ ಜೋ ಎನ್ನ ಎನ್ನ ಕಂದ ಗೋವಿಂದ 2
ತ್ರಿವಿಡೆ ತಾಳ
ಅಷ್ಟಮಹಿಷಿಯರು ಇಟ್ಟು ಗುಟ್ಟಲಿ ಅಯ್ಯ |
ಸೋಳ ಸಾಸಿರ ಮಂದಿ ಆಳು ಮಾಡುವರೆನ್ನ |
ಸೋಳÀಸಾಸಿರ ಮಂದಿ ಬೀಳು ಮಾಡುವರೆನ್ನ |
ಪುರಂದರವಿಠಲನ್ನ ಕಂಡಲ್ಲೆ ಬಿಡುವೆನೆ |
ಮೇಲೆ ಬಂದದ್ದು ಮತ್ತೆ ನೋಡಿಕೊಂಬೆ ಅಯ್ಯ ಅಯ್ಯಾ 3
ಅಟ್ಟ ತಾಳ
ಮಂಥನ ಮಾಡಲು ಮಾಧವ ಮೊಸರೆ ಮೀಸಲು |
ಇಂಥಾದ್ದುಂಟೆ ಬಿಡು ಬಿಡು ಕರದಲ್ಲಿ ಕಡೆಗೋಲು |
ಎಂಥವನೊ ನೀನಂಜದೆ ಎನ್ನಾಳಿದೆ |
ಪುರಂದರವಿಠಲ ಇಂಥಾದ್ದುಂಟೆ ಬಿಡು ಕರದಲ್ಲಿ ಕಡಗೋಲು 4
ಆದಿ ತಾಳ
ದೇಹವ ಮಾಡಿದೆÉ ದೇಹವ ಕೂಡಿದೆ |
ದೇಹವು ತಾನೆಂಬ ಭ್ರಮೆಯ ಬಿಡಿಸಿದೆ |
ದೇಹಿ ನಾನಾದೆನೊ ದೇವ ನೀನಾದೆಯೋ |
ಶ್ರೀವರನಾಥ ಪುರಂದರವಿಠಲ 5
ಜೊತೆ
ಅನಂತಮೂರತಿ ಅನಂತಕೀರುತಿ
ಅನಂತನಾಭ ಪುರಂದರವಿಠಲ
No comments:
Post a Comment