Labels

Monday, 2 December 2019

ಯಾತಕೆ ದಯಮಾಡಲೊಲ್ಲೆYatake dayamaadalolle

ಯಾತಕೆ ದಯಮಾಡಲೊಲ್ಲೆ ರಂಗಯ್ಯ - ಜಗ ಪ
ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ಅ
ಚಿಕ್ಕಂದು ಮೊದಲೆ ನಾನು ರಂಗಯ್ಯ - ನೀನೆದಿಕ್ಕೆಂದು ನಂಬಿದೆನೊ ರಂಗಯ್ಯ1
ನೆಂಟರಿಷ್ಟರು ನೀನೆ ರಂಗಯ್ಯ - ನೀನೆಬಂಟರಿಗೆ ಬಂಟನಯ್ಯ ರಂಗಯ್ಯ2
ದಾಸರ ದಾಸನಯ್ಯ ರಂಗಯ್ಯ - ಕರ್ಮಪಾಶಗಳ ಮೋಚನೆ ಮಾಡೊ ರಂಗಯ್ಯ3
ಶೇಷಗಿರಿ ವಾಸ ರಂಗಯ್ಯ - ಆದಿಕೇಶವನೆ ರಕ್ಷಿಸೊ ರಂಗಯ್ಯ4

No comments:

Post a Comment