ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಪ
ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ1
ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ 2
ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ 3
No comments:
Post a Comment