ಯದುನಂದನನ ನೋಡುವ - ಬಾರೆ ಲತಾಂಗಿ |
ಹದಿನಾಲ್ಕು ಜಗವನ್ನು ಪೊರೆವ - ನೀಲಘನಾಂಗನ ಪ
ಬಿಗಿದುಟ್ಟ ಕನಕಾಂಬರ - ಕಾಂಚಿಯ ದಾಮ |
ನಗೆಯರಳ ಧರಿಸಿದವನ |
ಅಗಣಿತ ಗುಣನಿಧಿ ಜಗವ ಮೋಹಿಪ ಕೃಷ್ಣನ 1
ಸಣ್ಣ ಪೊಂಗಳಲೂದುತ - ವನ್ಯದಳಾಕ್ಷ |
ಕಣ್ಣ ಸನ್ನೆಯ ಮಾಡುತ ||
ಚಿಣ್ಣರ ಒಡಗೂಡಿ ಚಿಗಿದು ಬಾಹ ಕೃಷ್ಣನ 2
ಮಂದಹಾಸ ಮುಖಾಂಬುಜ - ಪೊಂದಿದಂಥ |
ಗಂಧ-ಕಸ್ತೂರಿ ತಿಲಕಾ |
ಬಂದ ನಮ್ಮ ಪುರಂದರವಿಠಲ ಇಂದಿರೆಯರಸನ 3
No comments:
Post a Comment