ಯಾಕೆ ಮೂಕನಾದ್ಯೋ ಗುರುವೇ ನೀ
ನ್ಯಾಕೆ ಮೂಕನಾದ್ಯೋ ? || ಪ ||
ಯಾಕೆ ಮೂಕನಾದ್ಯೋ ಲೋಕಪಾಲಕ ಎನ್ನ
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ || ಅ ||
ಹಿಂದಕ್ಕೆ ನೀ ಎನ್ನ ಮುಂದೆ ಸುಳೀದೀಗ
ಮಂದಿಯೆಂದದಿ ಎನ್ನ ಮಂದನ್ನ ಮಾಡೀಗ || ೧ ||
ಬೇಕಾಗದಿದ್ದರೆ ಯಾಕೆ ಕೈಪಿಡಿದಿ
ಕಾಕುಜನರೊಳೆನ್ನ ನೂಕಿಬಿಟ್ಟು ಈಗ || ೨ ||
ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮನೆ ನೀ ಎನ್ನ ಬಿಟ್ಟು ಈಗ || ೩ ||
ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ
ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರ್ಯಾರೋ || ೪ ||
ಜನ್ಯನು ನಾನೀಗ ಎನ್ನ ಜನಕನು ನೀನು
ಮನ್ನಿಸು ನೀ ನಿತ್ಯ ನನ್ಯಶರಣನಲ್ಲೆ || ೫ ||
ಈಗ ಪಾಲಿಸದಿರೆ ಯೋಗಿ ಕುಲವರ್ಯ
ರಾಘವೇಂದ್ರನೆ ಭವಸಾಗುವ್ಹಧ್ಯಾಗಯ್ಯ || ೬ ||
ನಾಥನು ನೀನು ಅನಾಥನು ನಾನಯ್ಯ
ಪಾಥೋಜ ಗುರುಜಗನ್ನಾಥ ವಿಠ್ಠಲ ಪ್ರೀಯ || ೭ ||
ನ್ಯಾಕೆ ಮೂಕನಾದ್ಯೋ ? || ಪ ||
ಯಾಕೆ ಮೂಕನಾದ್ಯೋ ಲೋಕಪಾಲಕ ಎನ್ನ
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ || ಅ ||
ಹಿಂದಕ್ಕೆ ನೀ ಎನ್ನ ಮುಂದೆ ಸುಳೀದೀಗ
ಮಂದಿಯೆಂದದಿ ಎನ್ನ ಮಂದನ್ನ ಮಾಡೀಗ || ೧ ||
ಬೇಕಾಗದಿದ್ದರೆ ಯಾಕೆ ಕೈಪಿಡಿದಿ
ಕಾಕುಜನರೊಳೆನ್ನ ನೂಕಿಬಿಟ್ಟು ಈಗ || ೨ ||
ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮನೆ ನೀ ಎನ್ನ ಬಿಟ್ಟು ಈಗ || ೩ ||
ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ
ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರ್ಯಾರೋ || ೪ ||
ಜನ್ಯನು ನಾನೀಗ ಎನ್ನ ಜನಕನು ನೀನು
ಮನ್ನಿಸು ನೀ ನಿತ್ಯ ನನ್ಯಶರಣನಲ್ಲೆ || ೫ ||
ಈಗ ಪಾಲಿಸದಿರೆ ಯೋಗಿ ಕುಲವರ್ಯ
ರಾಘವೇಂದ್ರನೆ ಭವಸಾಗುವ್ಹಧ್ಯಾಗಯ್ಯ || ೬ ||
ನಾಥನು ನೀನು ಅನಾಥನು ನಾನಯ್ಯ
ಪಾಥೋಜ ಗುರುಜಗನ್ನಾಥ ವಿಠ್ಠಲ ಪ್ರೀಯ || ೭ ||
No comments:
Post a Comment