ವನಿತೆ ನೀ ತೋರಿಸೆ ಹನುಮನ ಬೇಗ |
ತನು-ಮನ-ಧನವನು ನಿನಗೀವೆನೀಗ ಪ
ಆತುರದಿಂದಲಿ ಉದಧಿಹಾರಿದವನ |
ಪ್ರೀತಿಯಲಿ ರಾಮನ ಮುದ್ರೆಯಿತ್ತವನ ||
ಘಾತಕರನ್ನು ಮುರಿದಟ್ಟಿದವನ - ಸತಿ |
ಸೀತೆಯ ಪತಿ ರಘುನಾಥಗರ್ಪಿಸಿದನ 1
ಪಾಂಡುನಂದನನಿಗೆ ಅನುಜನಾಗಿಹನ |
ಪುಂಢರೀಕಾಕ್ಷನ ಚರಣಸೇವಿಪನ ||
ಪುಂಡ ಕೌರವ ಶಿರವ ಚೆಂಡನಾಡಿದವನ 2
ಎರಡು ಮೂರಾರೊಂದು ಕುಮತ ಖಂಡಿಸಿದನ |
ಭರದಿ ಮಧ್ವಮತ ಉದ್ಧರಿಸಿದನ ||
ಧರೆಯೊಳಧಿಕ ಶ್ರೀಹರಿಯ ಭಜಕನ |
ವರದ ಶ್ರೀ ಪುರಂದರ ವಿಠಲರಾಯನ 3
No comments:
Post a Comment