Labels

Sunday, 1 December 2019

ಸಿರಿಯ ಮದವೆ ಮುಕುಂದ siriya maduve mukund

ಸಿರಿಯ ಮದವೆ ಮುಕುಂದ - ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ ಪ
ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠಪಟ್ಟಣವು, ಸಿರಿಯೋಲಗವ ನಿತ್ಯದಿಕಟ್ಟಿ ಓಲೈಸುತಿಹ ದಾಸರನಿಮಿಷರು, ಮನಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ 1
ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿಯುಕುತಿಯೊಳು ಲೋಕಗಳ ಸೃಜಿಸುವಂಥಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೋ-ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ 2
ಬಲ್ಲಿದರಿಗೆಲ್ಲ ಬಲ್ಲಿದನೆಂಬ ಅರಿ ಹೃದಯದಲ್ಲಣನೆಂಬ ಬಿರುದು ಸಾಹಸಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ ? 3
ಶೇಷ ಹಾಸು ಮಂಚವು, ಗರುಡ ತುರುಗವು, ಪೀತವಾಸದುಡುಗೆಯು, ಕೊರಳಲಿ ವೈಜಯಂತಿಮೀಸಲಳಿಯದ ಪುಷ್ಪಮಾಲೆಗಳ ಧರಿಸಿ ಜಗದೀಶನೆಂಬುವ ಬಿರುದು ಹೊಗಳಿಸಿಕೊಳ್ಳುವ 4
ಭಕ್ತವತ್ಸಲನೆಂಬ ಬಿರುದು ಬಿಡು, ಅಲ್ಲದೊಡೆಶಕ್ತ ಎನ್ನನು ಕಾಯೋ ಸುಲಭದಿಂದಮುಕ್ತಿಯನ್ನು ಪ್ರಕಟಿಸಲು ಲೋಕದೊಳು ಭಜಕರ್ಗೆಯುಕ್ತ ಕರ್ತ ಕಾಗಿನೆಲೆಯಾದಿಕೇಶವರಾಯ5

No comments:

Post a Comment