Labels

Sunday, 1 December 2019

ಶ್ರೀರಾಮರ ಪೂಜಿಸಲಿಲ್ಲ shriramara poojisalilla

ಶ್ರೀರಾಮರ ಪೂಜಿಸಲಿಲ್ಲ - ಮೈಮರೆತೆನಲ್ಲ ಪ
ಬಾಲತ್ವದಲಿ ಬಲು ಲೀಲೆಯಿಂದಲಿ ನಾನುಕಾಲವ ಕಳೆದೆನಲ್ಲ - ಮೈಮರೆತೆನಲ್ಲ 1
ಸತಿಸುತರೆ ಎನಗೆ ಗತಿಯೆಂದು ತಿಳಿದು ನಾನುಮತಿಗೆಟ್ಟು ಭ್ರಾಂತನಾದೆನಲ್ಲ - ಮೈಮರೆತೆನಲ್ಲ 2
ಹೊನ್ನ ಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲಚೆನ್ನಕೇಶವನ ನಂಬಲಿಲ್ಲ - ಮೈಮರೆತೆನಲ್ಲ3

No comments:

Post a Comment