ಶ್ರೀಮದಾನಂದ ತೀರ್ಥರೆಂಬ |ಅರ್ಥೀಯ ಪೆಸರುಳ್ಳ |ಗುರುಮಧ್ವಮುನಿರಾಯ
|ಏನೆಂಬೆ ನಾನಿನ್ನ ಕರುಣಕೆ ಎಣೆಗಾಣೆ ಪ||
|ಏನೆಂಬೆ ನಾನಿನ್ನ ಕರುಣಕೆ ಎಣೆಗಾಣೆ ಪ||
ಬ್ಯಾಸರದೆ ಸರ್ವರಲ್ಲಿ |ಶ್ವಾಸ ಜಪಗಳ ಮಾಡಿಗುಂ |
ಶ್ರೀಶಗರ್ಪಿಸುತ ಹರಿ |ದಾಸರನ್ನು ಪಾಲಿಸಿದೆ ||
ಶ್ರೀಶಗರ್ಪಿಸುತ ಹರಿ |ದಾಸರನ್ನು ಪಾಲಿಸಿದೆ ||
ಅಂದು ಹನುಮಂತನಾಗಿಬಂದು ಸುಗ್ರೀವಗೆ ಗುರುಂ |
ಅಂದವಾದ ಪದವಿತ್ತಾ |ನಂದವನು ಬಡಿಸಿದೆ ಗುರುಂ ||
ಅಂದವಾದ ಪದವಿತ್ತಾ |ನಂದವನು ಬಡಿಸಿದೆ ಗುರುಂ ||
ಕುಂತಿಯ ಕುಮಾರನಾಗಿ |ಹಂತ ಕೌರವರನ ಕೊಂದಿ ಗುರುಂ |
ಅಂತು ಪುಣ್ಯವ ಶ್ರೀ |ಕಂತು ಪಿತಗರ್ಪಿಸಿದೆಯೋ ||
ಅಂತು ಪುಣ್ಯವ ಶ್ರೀ |ಕಂತು ಪಿತಗರ್ಪಿಸಿದೆಯೋ ||
ಅದ್ವೈತರನು ಕಾದಿ |ಗೆದ್ದು ನಿನ ಭಕ್ತರಿಗೆ ಗುರುಮಧ್ವಮುನಿರಾಯ |
ಶುದ್ಧ ತಾತ್ಪರ್ಯ ವಾಕ್ಯ |ಪದ್ಧತಿಯ ತಿಳಿಸಿದಿ ಗುರುಂ ||
ಶುದ್ಧ ತಾತ್ಪರ್ಯ ವಾಕ್ಯ |ಪದ್ಧತಿಯ ತಿಳಿಸಿದಿ ಗುರುಂ ||
ಗುರುಪ್ರಾಣೇಶ ವಿಠಲಾಪರನೆಂದು ಡಂಗುರವ ಗುರುಂ |
ಸಾರಿಸಿ ಸಜ್ಜನರನ್ನು |ಹರಿಲೋಕ ಸೇರಿಸಿದಿ ಗುರುಂ ||
ಸಾರಿಸಿ ಸಜ್ಜನರನ್ನು |ಹರಿಲೋಕ ಸೇರಿಸಿದಿ ಗುರುಂ ||
No comments:
Post a Comment