Labels

Sunday, 1 December 2019

ಹಣ್ಣು ಕೊಂಬುವ ಬನ್ನಿರಿ nannu kombuva banniri

ಹಣ್ಣು ಕೊಂಬುವ ಬನ್ನಿರಿ - ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ
ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆ ಬಾಳೆಹಣ್ಣುಅ
ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು 1
ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣುಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು 2
ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣುಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು 3

No comments:

Post a Comment