Labels

Tuesday, 17 December 2019

ಲಕ್ಷ್ಮೀಕಾಂತ ಬಾರೋ ಶುಭ laxmikanta baaro shubha

ಲಕ್ಷ್ಮೀಕಾಂತ ಬಾರೋ ಶುಭ ಲಕ್ಷಣವಂತ ಬಾರೋ ಪ
ಪಕ್ಷಿವಾಹನಾ ಬಾರೋ ಪಾವನ ಮೂರ್ತಿ ಬಾರೋ ಅ.ಪ
ಆದಿಮೂಲ ವಿಗ್ರಹ ವಿನೋದಿ ನೀನೆ ಬಾರೋ
ಸಾಧುಸಜ್ಜನ ಸತ್ಯಯೋನಿ - ದಾನಿ ನೀನೆ ಬಾರೋ 1
ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ
ರೂಢಿ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ 2
ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆನು ಬಾರೋ
ಪನ್ನಂಗ ಶಯನ ಸಿರಿ-ಪುರಂದರ ವಿಠಲ ಬಾರೋ3

No comments:

Post a Comment