ಬಂದರಾ ರಾಘವೇಂದ್ರರಾಯರು ಮಂತ್ರ
ಮಂದಿರ ವೆಂಬೀ ಸ್ಥಳಕೆ ವಿಭವದಿ ಪ
ಇಂದು ಭಜಕ ದ್ವಿಜ ವೃಂದಕೆ ಪರಮಾ
ನಂದ ಗರಿಯಲು ಶ್ಯಂದನವೇರಿ ಅ.ಪ
ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ
ಸಂದಣಿಸಿತು ಆನಂದದಿ ನೋಡುತಲಿ
ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ
ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು-
ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ
ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ
ಬಂಧವ ಬಿಡಿಸಲು 1
ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು
ಪಿಡಿದು ಸೇವಿಸುವ ಎಡಬಲದಲಿ ಸುಜನಾ
ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ
ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ
ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ
ಗಡಣವ ನೀಕ್ಷಿಸಿ ಬಿಡದೆ ಪೊರಿವೆನೆಂದು
ಕಡು ವೈಭವದಲಿ 2
ಥಳಥಳಿಸುತ ಕಂಗೊಳಿಸುವ ಮಣಿ
ಮುಕುಟ ದಿಂದ ದಿ-
ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ
ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ-
ರ್ವಾಂಲಕಾರ ವಿಲಸಿತ ಮಂಗಳತರ ಗಾತ್ರದಿ
ಪೊಳೆಯುತ ಭಜಕರ ಕ-
ಲುಷಾಭ್ರಕೆ ಮಾರುvರೆÀನಿಸುತ ಇಳೆಯೊಳು ಪಂಡಿತ
ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ3
ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ-
ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ
ಪಾಲಿಸುವ ದೇವ ಸ್ವಭಾವ ಶರಣ ಸಂಜೀವ
ಕರದಲ್ಲಿಗೆ ಬರುವ ಎನ್ನುತ ತುತಿಪರು
ದೃಗ್ಭಾಷ್ಪವ ಸುರಿಸುತ ಮೈಮರೆಯುತ
ಬಲು ನಿರ್ಮಲ ಅಂತರಂಗದಿತವ ಪದಂಗಳ
ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು 4
ಪುರದರಸನು ತನ್ನ ಸಿರಿಪರಿವಾರದಲಿ
ಚರಿಸುತ ಬರುತ ಕಾಣುತಲೆ ಗುರುವರ
ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ
ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ
ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ
ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು
ಮೆರೆಯುವ 'ಶಿರಿ ಕಾರ್ಪರ ನರಹರಿಯ' ನೊಲಿಸಿರುವ
ಗುರು ಪ್ರಹ್ಲಾದರು 5
No comments:
Post a Comment