ಬ೦ದದ್ದೆಲ್ಲ ಬರಲೀ ರಾಘವೇ೦ದ್ರರ ದಯವಿರಲಿ || ಪ ||
ಹಿ೦ದೆ ಬಹುಜನುಮದಿ೦ದ ಮಾಡಿದಘ
ಸ೦ದಣಿ ಕಳೆವಗಿದೊ೦ದರಿದೇನೈ || ಅ ||
ದಾಶರಥಿವ್ಯಾಸ – ನರಕೇಸರಿ ಶ್ರೀ ಯಾದವೇಶ
ಈಸುಮೂರ್ತಿಗಳುಪಾಸ-ನಯಲೇಸಾಗಿ ಮಾಳ್ಪ ವಿಶೇಷ
ದಾಸಜನರ ಅಭಿಲಾಷೆ ಪೂರ್ತಿಸುವ
ಶ್ರೀಸುಧೀ೦ದ್ರಯತೀಶರ ದಯವಿರೆ || ೧ ||
ಧರೆ ಕಳಕೊ೦ಡವರು-ಉಡಲು ಅರಿವೆ ಇಲ್ಲದವರು
ತರಳಸ೦ಪದರಹಿತರು-ಮಹದುರುತರ ಜ್ಞಾನಿಭಕುತರು
ತೆರಳಿಬ೦ದು ಸ೦ದರುಶನ ಮಾಡಲು
ಕರೆದೀಪ್ಸಿತ ಕೊಡುವರ ದಯವಿರುತಿರೆ || ೨ ||
ವಾತಪಿತ್ತ ಕಫಶೀತಾ-ಸನ್ನಿಪಾತಕಜ್ವರ ಪ್ರಖ್ಯಾತ
ಭೂತಪ್ರೇತಭಯವ್ರಾತ-ಕಳೆವಾತುರರಿಗೆ ಫಲದಾತ
ನಾಥ ಅಭಿನವಜನಾರ್ಧನವಿಠ್ಠಲನ
ಪ್ರೀತಿ ದೂತನ ದಯ ಅತಿಶಯವಾಗಿರೆ || ೩ ||
ಹಿ೦ದೆ ಬಹುಜನುಮದಿ೦ದ ಮಾಡಿದಘ
ಸ೦ದಣಿ ಕಳೆವಗಿದೊ೦ದರಿದೇನೈ || ಅ ||
ದಾಶರಥಿವ್ಯಾಸ – ನರಕೇಸರಿ ಶ್ರೀ ಯಾದವೇಶ
ಈಸುಮೂರ್ತಿಗಳುಪಾಸ-ನಯಲೇಸಾಗಿ ಮಾಳ್ಪ ವಿಶೇಷ
ದಾಸಜನರ ಅಭಿಲಾಷೆ ಪೂರ್ತಿಸುವ
ಶ್ರೀಸುಧೀ೦ದ್ರಯತೀಶರ ದಯವಿರೆ || ೧ ||
ಧರೆ ಕಳಕೊ೦ಡವರು-ಉಡಲು ಅರಿವೆ ಇಲ್ಲದವರು
ತರಳಸ೦ಪದರಹಿತರು-ಮಹದುರುತರ ಜ್ಞಾನಿಭಕುತರು
ತೆರಳಿಬ೦ದು ಸ೦ದರುಶನ ಮಾಡಲು
ಕರೆದೀಪ್ಸಿತ ಕೊಡುವರ ದಯವಿರುತಿರೆ || ೨ ||
ವಾತಪಿತ್ತ ಕಫಶೀತಾ-ಸನ್ನಿಪಾತಕಜ್ವರ ಪ್ರಖ್ಯಾತ
ಭೂತಪ್ರೇತಭಯವ್ರಾತ-ಕಳೆವಾತುರರಿಗೆ ಫಲದಾತ
ನಾಥ ಅಭಿನವಜನಾರ್ಧನವಿಠ್ಠಲನ
ಪ್ರೀತಿ ದೂತನ ದಯ ಅತಿಶಯವಾಗಿರೆ || ೩ ||
No comments:
Post a Comment