Labels

Wednesday, 4 December 2019

ಆರ್ಯನ್ನ ಯೋಗಧುರ್ಯನ್ aryanna Yogaduryanna

ಆರ್ಯನ್ನ ಯೋಗಧುರ್ಯನ್ನ ಭಜಿಸಿವರ್ಯನ್ನ ಮಧ್ವಾಚಾರ್ಯನ್ನ||pa||
ಅಕಳಂಕ ಮಹಿಮ ಚರಿತ್ರನ್ನ ಈಸಕಲ ಭುವನಕೆ ಪವಿತ್ರನ್ನ
ಪ್ರಕಟ ಭಾರತಿ ಸತ್ಕಳತ್ರನ್ನ ಪಾಪ-ನಿಕರಕಾನನವೀತಿಹೋತ್ರನ್ನ ||1||
ನಿರ್ಜಿತ ಪಾಷಂಡಯೂಥನ್ನ ದೂರವರ್ಜಿತ ಭವದುಃಖಬದ್ಧನ್ನ
ಸಜ್ಜನರಘಕೆ ನಿರೋಧನ್ನ ದೋಷವರ್ಜಿತ ಗುಣಪೂರ್ಣಬೋಧನ್ನ ||2||
ಸದಮಲ ಲಕ್ಷಣ ತುಂಗನ್ನ ಸಿರಿಸದನÀನ್ನ ಕರುಣಾಂತರಂಗನ್ನ
ಮದಮೋಹ ತಿಮಿರ ಪತಂಗನ್ನ ಹಯ-ವದನನ್ನ ಚರಣಾಂಬ್ಜಭೃಂಗನ್ನ ||3||

No comments:

Post a Comment