Labels

Friday, 6 December 2019

ಆರತಿ ಮಾಡುವೆವು ಲಕ್ಷ್ಮೀ ದೇವಿಗೆ aarati maaduvevu laxmidevige

ಆರತಿ ಮಾಡುವೆವು ಲಕ್ಷ್ಮೀ ದೇವಿಗೆ||||ಸಾಯಕ್ಕ ಧೇಯಕ್ಕಗೆ ಸಂಪತ್ತು ಕೊಟ್ಟ ಲಕ್ಷ್ಮೀದೇವಿಗೆ||.||
ಸೋಮಕಾಂಬೆ ಪೂಜೆ ಮಾಡಿ ಭುಂಜಿಸುತಿರಲು
ರಾಜನರಸಿ ಅಡಿಗೆ ಕಂಡು ನಿಂದೆ ಮಾಡಿದಳು||||
ನಿಂದೆ ಮಾಡಿದ ಕಾರಣದಿಂದ ರಾಜ್ಯ ಪೋಗಲು
ಅಡವಿಯೊಳಗೆ ಎರಡು ಶಿಶು ಪೆತ್ತು ವನಕೆ ನಡೆದಳು||||
ಸೋಮೇಶಭಟ್ಟನು ತುಳಸಿಗೆಂದು ಬಂದು
ಎರಡೂ ಮಕ್ಕಳನ್ನು ಎತ್ತಿ ಮನೆಗೆ ಹೋದನು||||
ರಾಜಮಂತ್ರಿಗಳಿಗೆ ಮದುವೆ ಮಾಡಿಕೊಟ್ಟನು
ರಾಜನರಸಿ ಧೇಯಕ್ಕ ಗೌರಿಯ ಮರೆತಳು||||
ಸಾಯಕ್ಕನ ಮನೆಗೆ ಬಂದು ಭೀಮೇಶಕೃಷ್ಣನ ಸತಿಯ ಪೂಜಿಸಿ 
ಮರಳಿ ತನ್ನ ರಾಜ್ಯವ ಪಡೆದಳು||||

No comments:

Post a Comment